ಸುದ್ದಿಲೈವ್/ಶಿವಮೊಗ್ಗ
ಕೇವಲ 20 ರೂ. ನೀಡಲಿಲ್ಲ ಎಂಬ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗಿದ್ದು ಓರ್ವನ ಮೇಲೆ ಸಿಮೆಂಟ್ ಕಲ್ಲು ಎತ್ತುಹಾಕಿರುವ ಘಟನೆ ಶಿವಮೊಗ್ಗದ ಗಾರ್ಡನ್ ಏರಿಯಾದಲ್ಲಿ ನಡೆದಿದೆ.
ಘಟನೆಯ ಕುರಿತು ಹೋಂ ಗಾರ್ಡ್ ನ ಸಿಬ್ಬಂದಿಯೋರ್ವರು ಗಾಯಗೊಂಡವನನ್ನ ರಕ್ಷಣೆ ಮಾಡಿ ದೊಡ್ಡಪೇಟೆ ಪೊಲಿಸ್ ಠಾಣೆಯಲ್ಲಿ ಸಿಮೆಂಟ್ ಕಲ್ಲು ಎತ್ತುಹಾಕಿದವನ ವಿರುದ್ಧ ದೂರು ದಾಖಲಾಗಿಸಿದ್ದಾರೆ.
ಹೋಂ ಗಾರ್ಡ್ ಸಿಬ್ಬಂದಿ ಸಿಟಿ ಮಾಲ್ ಎದುರು ವಾಹನ ಸಂಚಾರ ನಿಯಂತ್ರಣ ಮಾಡುತ್ತಿದ್ದ ವೇಳೆ ಅಪರಿಚಿತನೋರ್ವ ಬಂದು ಗಾರ್ಡನ್ ಏರಿಯಾದಲ್ಲಿ ಇಬ್ಬರು ಜಗಳವಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಮಾಹಿತಿ ಆಧರಿಸಿ ಹೋಮ್ ಗಾರ್ಡ್ ಗೌತಮ್ ಸ್ಥಳಕ್ಕೆ ತೆರಳಿದ್ದಾರೆ.
ಗೌತಮ್ ಸ್ಥಳಕ್ಕೆ ಹೋದಾಗ ರಿಯಾಜ್ ಅಹಮದ್ ಎಂಬಾತನ ಕೈಯಲ್ಲಿ ಸಿಮೆಂಟ್ ಇಟ್ಟಿಗೆ ಇಟ್ಟುಕೊಂಡಿದ್ದನು. ಕೇಳಿದ್ದಕ್ಕೆ 20 ರೂ. ಹಣ ಕೇಳಿದ ಹಣ ಕೊಡದ ಕಾರಣ ಜಗಳವಾಗಿದೆ. ಆತನೂ ಹಲ್ಲೆ ಮಾಡಿದ್ದಾನೆ ಎಂದು ತಿಳಿಸಿದ್ದು. ಹಲ್ಲೆಗೊಳಗಾಗಿ ನೆಲಕ್ಕೆ ಬಿದ್ದವನನ್ನ ಮೆಗ್ಗಾನ್ ಗೆ ಕಳುಹಿಸಿಕೊಡಲಾಗಿದೆ. ರಿಯಾಜ್ ಯಾನೆ ಮಜರ್ ಬಾಯಿ ಆತನ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಇದನ್ನೂ ಓದಿ-https://www.suddilive.online/2024/08/blog-post_6.html
0 ಕಾಮೆಂಟ್‌ಗಳು