ಸುದ್ದಿಲೈವ್/ಶಿವಮೊಗ್ಗೆ
ಶುಕ್ರವಾರ ಕುಂಸಿ ಪೊಲೀಸ್ ಠಾಣೆಯ ಮಂಜರಿಕೊಪ್ಪದಲ್ಲಿ 60 ವರ್ಷದ ವೃದ್ಧೆಯ ಕೊಲೆಯಾಗಿದೆ. ಮೃತ ವೃದ್ಧೆಯ ಕುತ್ತಿಗೆ ಭಾಗದಲ್ಲಿ ರಕ್ತದ ಮಾರ್ಕ್ ಕಂಡುಬಂದಿದೆ.
ಸಾವಿತ್ರಮ್ಮ ಎಂಬ 60 ವರ್ಷದ ವೃದ್ಧೆಯನ್ನ ಕೊಲೆ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ಪಿ ಮಿಥುನ್ ಕುಮಾರ್ ವೃದ್ಧೆಯ ಕೊಲೆಗಾರನ ಗುರುತುಪತ್ತೆಹಚ್ಚಲಾಗಿದೆ ಎಂದು ಸುದ್ದಿಲೈವ್ ಗೆ ಮಾಹಿತಿ ನೀಡಿದ್ದಾರೆ.
ಮಂಜರಿಕೊಪ್ಪದಲ್ಲಿ ಸಾವಿತ್ರಮ್ಮ ಏಕಾಂಗಿಯಾಗಿ ವಾಸವಾಗಿದ್ದರು. ಇವರಿಗೆ ಮೂವರು ಮಕ್ಕಳಿದ್ದು ಇಬ್ಬರು ಹೆಣ್ಣು ಮಕ್ಕಳು ಮತ್ತೋರ್ವ ಗಂಡು ಮಗನಿದ್ದಾನೆ. 20 ವರ್ಷದ ಹಿಂದೆ ಗಂಡನನ್ನ ಕಳೆದುಕೊಂಡ ಸಾವಿತ್ರಮ್ಮ ಗಂಡು ಮಗ ಜಗದೀಶನೊಂದಿಗೆ ವಾಸವಾಗಿದ್ದರು.
ಇಬ್ಬರ ಹೆಣ್ಣುಮಕ್ಕಳಿಗೆ ಮದುವೆ ಮಾಡಿದ್ದರು. ಜಗದೀಶ ವಿಪ್ರಮಿತ ಕುಡಿಯುವ ಚಟಕ್ಕೆಒಳಗಾಗಿ ಲಿವರ್ ಡ್ಯಾಮೇಜ್ ಗೆ ಒಳಗಾಗಿದ್ದಾನೆ. ಚಿಕಿತ್ಸೆಗಾಗಿ ಅಣ್ಣಪುರದಲ್ಲಿ ಸಹೋದರಿಯ ಮನೆಯಲ್ಲಿದ್ದಾನೆ. ಇತ್ತ ಅಜ್ಜಿ ಸಾವಿತ್ರಮ್ಮ ಒಬ್ಬಂಟಿಯಾಗಿದ್ದಾರೆ. ಶುಕ್ರವಾರ ಬೆಳಿಗ್ಗೆ ಮಲಗಿದ ಚಾಪೆಯಿಂದ ಮೇಲೆದ್ದಿಲ್ಲ.
ಪರಿವಯಸ್ಥರು ಮನೆಯ ಹೊರಗಿನಿಂದ ಕೂಗಿದರೂ ಮಲಗಿದ ವೃದ್ಧೆ ಮೇಲೆದ್ದಿರಲಿಲ್ಲ. ಗ್ರಾಮಸ್ಥರೊಂದಿಗೆ ಒಳಗೆ ಹೋಗಿ ನೋಡಿದಾಗ ವೃದ್ಧೆಯ ಕೊಲೆಯಾಗಿರುವುದು ತಿಳಿದು ಬಂದಿದೆ.ವೃದ್ಧೆಯ ಕುತ್ತಿಗೆಯಯಲ್ಲಿ ರಕ್ತದ ಮಾರ್ಕ್ ಕಂಡು ಬಂದಿದೆ. ಬೆಜ್ಜವಳ್ಳಿಯಲ್ಲಿ ವೃದ್ಧೆಯ ಮಗಳನ್ನ ಮತ್ತು ಅವರ ಸಹೋದರಿಗೆ ಸ್ಥಳೀಯರೆ ಕರೆ ಮಾಡಿ ವಿಷಯ ಮುಟ್ಟಿಸಿದ್ಸಾರೆ.
ಸ್ಥಳಕ್ಕೆ ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಕುಂಸಿ ಠಾಣೆ ಪೊಲೀಸ್ ಇನ್ ಸ್ಪೆಕ್ಟರ್ ಹರೀಶ್ ಪಟೇಲ್ ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಜರುಗಿಸಿದ್ದಾರೆ. ವೃದ್ಧೆಯ ಕೊಲೆ ಆರೋಪಿತರಿಗೆ ಖಾಕಿ ಪಡೆ ಬಲೆ ಬೀಸಿದೆ.
ಮತ್ತೊಂದು ಸಂಗತಿಯೆಂದರೆ 6 ತಿಂಗಳ ಹಿಂದೆ ವೃದ್ದೆಯ ಮನೆಯಲ್ಲಿ 50 ಸಾವಿರ ರೂ ಕಳುವಾಗಿತ್ತು. ಊರಿನವರಿಗೆ ವಿಷಯ ತಿಳಿಸಿದಸಗ ಕಳುವಿನ ಹಣ ನಿಗೂಢವಾಗಿ ಬ ಅಪಾಸ್ ವೃದ್ಧೆಯ ಮನೆಯಲ್ಲಿತ್ತು. ಇದಾದ ನಂತರ ತೆಂಗಿನಕಾಯಿ ಮತ್ತು ಅಲ್ಪಸ್ವಲ್ಪದ ಹಣ ಕಳುವಾಗುತ್ತಿತ್ತು ಎಂದು ಮೃತ ವೃದ್ದೆಯ ಮಗಳು ಠಾಣೆಗೆ ನೀಡಿದ ಎಫ್ಐಆರ್ ನಲ್ಲಿ ತಿಳಿದು ಬಂದಿದೆ.
ಇದನ್ನೂ ಓದಿ-https://www.suddilive.online/2024/08/blog-post_7.html
0 ಕಾಮೆಂಟ್‌ಗಳು