ಮಂಡ್ಯದ ಕಾಂಗ್ರೆಸ್ ಸಮಾವೇಶದಲ್ಲಿ ಶಿಕಾರಿಪುರದ ಮಾತು

 


ಸುದ್ದಿಲೈವ್/ಮಂಡ್ಯ


ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಿಜೆಪಿ-ಜೆಡಿಎಸ್ ಪಕ್ಷದ ಪಾದಯಾತ್ರೆಯನ್ನ ಖಂಡಿಸಿ ಮಂಡ್ಯದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ನ ಬೃಹತ್ ಸಮಾವೇಶದಲ್ಲಿ ಶಿಕಾರಿಪುರದಿಂದ ಗೆದ್ದು ಬಂದಿರುವ ಬಿ.ವೈ.ವಿಜೇಂದ್ರನವರ ಗೆಲುವಿನ ಬಗ್ಗೆ ಮಾತನಾಡಿದ್ದಾರೆ. 


ಸಮಾವೇಶದಲ್ಲಿ ಶಿಕಾರಿಪುರದಲ್ಲಿ 2023 ರ ಚುನಾವಣೆ ಹೊಂದಾಣಿಕೆ ರಾಜಕಾರಣ ನಡೆದಿತ್ತಾ ಎಂಬ ಅನುಮಾನ ಹುಟ್ಟುವಂತೆ ಡಿಕೆಶಿ ಮಾತನಾಡಿದ್ದಾರೆ. 2023 ರಲ್ಲಿ  ನಾಗರಾಜ್ ಗೌಡರಿಗೆ ಟಿಕೇಟ್ ಕೊಡಿ ಎಂದು ಇಡೀ ಕಾಂಗ್ರೆಸ್ ಅಂಗಲಾಚಿದ್ದರೂ ಪಕ್ಷ ಟಿಕೇಟ್ ನೀಡದೆ ಈಗ ವಿಜೇಂದ್ರರವರ ಹೋರಾಟಕ್ಕೆ ಡಿಕೆಶಿ  ಮಸಿ ಬಳಿಯಲು ಮುಂದಾದರಾ ಎಂಬ ಅನುಮಾನಕ್ಕೆ  ಅವರ ಹೇಳಿಕೆ ಎಡೆಮಾಡಿಕೊಟ್ಟಿದೆ. 


ಚುನಾವಣೆ ನಡೆದಾಗಲೂ ಡಿಕೆಶಿ ಅಧ್ಯಕ್ಷರಾಗಿದ್ದರೂ ಈಗಲೂ ಅಧ್ಯಕ್ಷರಾಗಿದ್ದಾರೆ. ಚುನಾವಣೆ ನಡೆದು 1.3 ವರ್ಷ ಕಳೆದಿದೆ. ಇಷ್ಟು ದಿನ ಕಳೆದ ನಂತರ ಡಿಕೆಶಿಯ ಈ ಮಾತು ಹಲವು ಅಚ್ಚರಿಯನ್ನುಂಟು ಮಾಡಿದೆ. ನಾಗರಾಜ್ ಗೌಡರಿಗೆ  ಕಾಂಗ್ರೆಸ್ ಟಿಕೇಟ್ ಕೊಟ್ಟಿದ್ದರೆ ವಿಜೇಂದ್ರ ಗೆಲ್ಲುತ್ತಿರಲಿಲ್ಲ ಎಂದು ಅಬ್ಬರಿಸಿದ್ದಾರೆ. 


ನಾಗರಾಜ್ ಗೌಡರಿಗೆ ಟಿಕೇಟ್ ಕೊಡದೆ ಇರಲು ಡಿಕೆಶಿಗೆ ತಡೆದಿದ್ದಾದರೂ ಏನು? ವಿಜೇಂದ್ರರವರ ಹೋರಾಟ ಪ್ರಬಲವಾಗುತ್ತಿದ್ದಂತೆ ಡಿಕೆಶಿ ಹೊಂದಾಣಿಕೆ ರಾಜಕಾರಣವನ್ನ ಬಿಚ್ಚಿಟ್ಟಿದ್ದಾರೆ. ಅಂದರೆ ಹೊಂದಾಣಿಕೆ ಮಾಡಿಕೊಂಡವರು ಯಾರು ಎಂಬುದನ್ನ ಬಹಿರಂಗ ಪಡಿಸಬೇಕಿತ್ತು. ಬಹಿರಂಗ ಪಡಿಸದೆ ಇರುವುದು ಅಚ್ಚರಿ ಮೂಡಿಸಿದೆ. 


ಇದನ್ನೂ ಓದಿ-https://www.suddilive.online/2024/08/blog-post_41.html

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು