ಭದ್ರ ಪಂಪ್ ಹೌಸ್ |
ಸುದ್ದಿಲೈವ್/ಚಿಕ್ಕಮಗಳೂರು
ಭದ್ರ ಜಲಾಶಯದಿಂದ ವಾಣಿ ವಿಲಾಸ್ ಸಾಗರಕ್ಕೆ ಹರಿದು ಹೋಗಬೇಕಿದ್ದ ನೀರಿಗೆ ತಾತ್ಕಾಲಿಕ ಅಡ್ಡಿಯುಂಟಾಗಿದ್ದು ಇದರಿಂದ ಚಿತ್ರದುರ್ಗದ ಜನಪ್ರತಿನಿಧಿಗಳು ಮತ್ತು ರೈತರಿಗೆ ಬೇಸರ ಉಂಟಾಗಿದೆ.
ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ಅಡಿಯಲ್ಲಿ ಬರುವ ಭದ್ರಾ ಮೇಲ್ದಂಡೆ ಯೋಜನೆ ಕಾಲುವೆಯ ಭದ್ರಾ ಜಲಾಶಯದಿಂದ ಪ್ರಾರಂಭವಾಗಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ, ಲಿಂಗದಹಳ್ಳಿ, ತರೀಕೆರೆ ಕಸಬಾ, ಅಮೃತಾಪುರ, ಅಜ್ಜಂಪುರ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಹಾದು ಹೋಗಿದೆ.
ಸರ್ಕಾರದ ನಿರ್ದೇಶನದಂತೆ ದಿ: 31-07-2024 ರಿಂದ ಶಾಂತಿಪುರ ಪಂಪ್‌ಹೌಸ್-1, ಜಂಭದಹಳ್ಳ ಅಕ್ವೆಡಕ್ಟ್, ತರೀಕೆರೆ ರೈಲು ಸೇತುವೆ, ಬೆಟ್ಟತಾವರೆಕೆರೆ ಪಂಪ್‌ಹೌಸ್-2 ಅಜ್ಜಂಪುರ ಸುರಂಗದ ಮಾರ್ಗವಾಗಿ ಹೆಬ್ಬೂರು ಗ್ರಾಮದ ಹತ್ತಿರವಿರುವ ವೈ-ಜಂಕ್ಷನ್‌ನಿಂದ ಹೆಬ್ಬೂರು, ಕಾಟಿನಗೆರೆ, ಬೆಣಕುಣಸೆ, ಮುಗಳಿ, ಬೇಗೂರು, ಆಸಂದಿ, ಹಡಗಲು, ಕಲ್ಕೆರೆ, ಹೆಚ್.ತಿಮ್ಮಾಪುರ,
ಕಲ್ಲಹಳ್ಳಿ, ಚಿಕ್ಕಬಳ್ಳೇಕೆರೆ, ಹನುಮನಹಳ್ಳಿ, ಚೌಳಹಿರಿಯೂರು ಮತ್ತು ಹಿ. ತಿಮ್ಮಾಮರ ಗ್ರಾಮಮಗಳ ಮಾರ್ಗವಾಗಿ ವೇದಾವತಿ ನದಿಗೆ ಸೇರುವ ಹಳ್ಳದ ಮುಖಾಂತರ ವಾಣಿ ವಿಲಾಸ ಸಾಗರಕ್ಕೆ ನೀರನ್ನು ಹರಿಸಲಾಗಿತ್ತು.
ಈ ಬಗ್ಗೆ ಸಾರ್ವಜನಿಕರು ಕಾಲುವೆ ಹಾಗೂ ಹಳ್ಳದ ಪಾತ್ರಗಳಲ್ಲಿ ತಿರುಗಾಡುವುದನ್ನ ನಿಷೇಧಿಸಲಾಗಿತ್ತು.ಆದರೆ ಶಾಂತಿಪುರ ಪಂಪ್ ಹೌಸ್ ನಲ್ಲಿ ಮೋಟರ್ ಮಾಡುವುದು ರಿಪೇರಿಗೆ ಬಂದ ಕಾರಣ ಭದ್ರ ಕಾಲುವೆಯಲ್ಲಿ ನೀರು ಹರಿಸಲಾಗುತ್ತಿಲ್ಲ. ಇದರಿಂದ ಅಲ್ಲಿನ ಜನಪ್ರತಿನಿಧಿಗಳ ಮತ್ತು ರೈತರ ಕೆಂಗಣ್ಣಿಗೆ ಗುರಿಯಾಗಿದೆ. ಜು.31 ರಿಂದಲೆ ಕಾಲುವೆಯಲ್ಲಿ ನೀರು ಹರಿಯದ ಕಾರಣ ಆ ಭಾಗದ ಜನರಲಗಲಿ ಬೇಸರ ಉಂಟಾಗಿದೆ.
0 ಕಾಮೆಂಟ್‌ಗಳು