ಭದ್ರೆಗೆ ಹಾರಿದ್ದು ಇಬ್ಬರು, ಓರ್ವರ ಶವಪತ್ತೆ, ಮತ್ತೊಬ್ಬರಿಗಾಗಿ ತೀವ್ರಗೊಂಡ ಶೋಧ

 

ತುಂಬಿದ ಭದ್ರೆ


ಸುದ್ದಿಲೈವ್/ಶಿವಮೊಗ್ಗ


ಭದ್ರಾ ನದಿಗೆ ಹಾರಿ ಇಬ್ಬರಲ್ಲಿ ಒಬ್ವರ ಮೃತ ದೇಹ ಪತ್ತೆಯಾದರೆ ಮತ್ತೊಬ್ಬರಿಗಾಗಿ ಹುಡುಕಾಟ ಮುಂದುವರೆದಿದೆ. 


ಭದ್ರ ನದಿಗೆ ನಿನ್ನೆ ಇಬ್ಬರು ಹಾರಿದ್ದು ಇದರಲ್ಲಿ ರಾಜು ಎಂಬುವರಿಗಾಗಿ ತೀವ್ರಶೋಧ ನಡೆದಿದೆ. ಮತ್ತೋರ್ವನ ಮೃತ ದೇಹ ಪತ್ತೆಯಾಗಿದೆ.‌ ನಗರ ಸಭೆಯ ಮುಂಭಾಗದಲ್ಲಿ ಮೃತದೇಹ ಪತ್ತೆಯಾಗಿದ್ದು ಆತನನ್ನ ಕುಣಿಗಲ್ ಮೂಲದವನು ಎಂದು ಹೇಳಲಾಗುತ್ತಿದೆ. 

ಮೆಸ್ಕಾಂ ಸಿಬ್ಬಂದಿ ರಾಜು


ಭದ್ರಾ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ‌ಜಿಲ್ಲೆಯ ಭದ್ರಾವತಿ ಪಟ್ಟಣದ ಹಳೆ ಸೇತುವೆ ಬಳಿ ನಡೆದಿದೆ. ಮೃತ ವ್ಯಕ್ತಿಯನ್ನು ಭದ್ರಾವತಿ ಪಟ್ಟಣದ ಹೊಸಮನೆ ಬಡಾವಣೆ ನಿವಾಸಿ ಹಾಗೂ ಮೆಸ್ಕಾಂ ಸಿಬ್ಬಂದಿ ರಾಜು (34) ಎಂದು ಗುರುತಿಸಲಾಗಿದೆ.


ಅಣ್ಣನ ಮಗನ ಮೊಬೈಲ್ ಗೆ ಮೆಸೇಜ್ ಮಾಡಿ  ನನ್ನ ಸಾವಿಗೆ ಯಾರು ಕಾರಣರಲ್ಲ ಎಂದು ಡೆತ್ ಮೆಸೇಜ್ ಬರೆದಿಟ್ಟು‌, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ರಾಜು ಅವರ ಮೃತದೇಹಕ್ಕಾಗಿ ‌ಭದ್ರಾ ನದಿಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ‌ ನಡೆಸುತ್ತಿದ್ದಾರೆ.


ಅದರಂತೆ ಮೊಬೈಲ್ ಮತ್ತು ಪರ್ಸನ್ನ ಭದ್ರಾವತಿಯ ಒಲ್ಡ್ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಸೇತುವೆ ಮೇಲೆ ಇಟ್ಟು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಮೃತ ದೇಹ ಭದ್ರಾವತಿ ನಗರ ಸಭೆ ಎದುರು ಪತ್ತೆಯಾಗಿದೆ. ಈತ ಕುಣಿಗಲ್ ಕಡೆಯವನು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ-https://www.suddilive.online/2024/08/blog-post_4.html

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು