VISL ಪುನರ್ ಸ್ಥಾಪನೆಗೆ ಮಾಜಿ ಪ್ರಧಾನಿ, ಸಂಸದರಿಂದ ಸಚಿವ ಕುಮಾರಸ್ವಾಮಿ ಭೇಟಿ



ಸುದ್ದಿಲೈವ್/ಶಿವಮೊಗ್ಗ


ಇಂದು ನವದೆಹಲಿಯಲ್ಲಿ ಮಾಜಿ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ದೇವೇಗೌಡರವರ ಸಮ್ಮುಖದಲ್ಲಿ ಕೇಂದ್ರ ಬೃಹತ್ ಕೈಗಾರಿಕಾ ಸಚಿವರಾದ ಸನ್ಮಾನ್ಯ ಶ್ರೀ ಎಚ್. ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಆದಷ್ಟು ಬೇಗನೆ ಬಂಡವಾಳ ಹೂಡಿಕೆ ಪಟ್ಟಿಯಿಂದ ಕೈಬಿಟ್ಟು ಕಾರ್ಖಾನೆಯ  ಪುನರುಜ್ಜೀವನಗೊಳಿಸುವ ಸಲುವಾಗಿ ಅಗತ್ಯ ಬಂಡವಾಳವನ್ನು ಹೂಡುವಂತೆ SAIL ಗೆ ನಿರ್ದೇಶನ  ನೀಡುವಂತೆ ಸಂಸದ ರಾಘವೇಂದ್ರ ಕೋರಿದ್ದಾರೆ. 


ಭದ್ರಾವತಿ ವಿಐಎಸ್ಎಲ್ ಕಾರ್ಖಾನೆಯನ್ನು ಪುನರ್ಜೀವನಗೊಳಿಸುವುದರಿಂದ ಕೇವಲ ಕರ್ನಾಟಕಡಲ್ಲಿ ಕೈಗಾರಿಕಾ ಅಭಿವೃದ್ಧಿ ಅಷ್ಟೇ ಅಲ್ಲದೆ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುವುದರೊಂದಿಗೆ ಭದ್ರಾವತಿ ತಾಲೂಕಿನ ಸಹಸ್ರಾರು ಕಾರ್ಮಿಕ ಕುಟುಂಬಗಳಿಗೆ ಆರ್ಥಿಕ ಭದ್ರತೆಯನ್ನು ನೀಡುತ್ತದೆ ಎಂಬ ಅಂಶವನ್ನು ಮನವರಿಕೆ ಮಾಡಿ ಕೊಡಲಾಯಿತು.



ಈ ಸಂದರ್ಭದಲ್ಲಿ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಸನ್ಮಾನ್ಯ ಶ್ರೀ ವಿ ಸೋಮಣ್ಣ ರವರು, ಭದ್ರಾವತಿ ವಿಐಎಸ್ಎಲ್ ನೌಕರರ ಸಂಘದ ಪದಾಧಿಕಾರಿಗಳಾದ ಶ್ರೀ ಜಗದೀಶ ಜೆ, ಶ್ರೀ ಮಲ್ಲಿಕಾರ್ಜುನ ಕೆ.ಬಿ., ಶ್ರೀ ಅಮೃತ್ ಕುಮಾರ್, ಶ್ರೀ ಮನು ಕೆ ಆರ್, ಶ್ರೀ ಮೋಹನ್ ಎಸ್ ಹಾಗೂ ಗುತ್ತಿಗೆ ಕಾರ್ಮಿಕ ನೌಕರರ ಪರವಾಗಿ ಶ್ರೀ ವಿನೋದ್ ಕುಮಾರ್ ಎಸ್, ಶ್ರೀ ಕಿರಣ್ ಜೆ. ಮತ್ತು ಶ್ರೀ ಆನಂದ್ ಇವರುಗಳು ಉಪಸ್ಥಿತರಿದ್ದರು.


ನಮ್ಮ ಬೇಡಿಕೆಗೆ ಆದಷ್ಟು ತ್ವರಿತವಾಗಿ  ಅಗತ್ಯ ಅನುದಾನದೊಂದಿಗೆ ಕಾರ್ಖಾನೆಯನ್ನು ಪುನರುಜ್ಜೀವನಗೊಳಿಸುವುದಾಗಿ ಸನ್ಮಾನ್ಯ ಎಚ್ ಡಿ ಕುಮಾರಸ್ವಾಮಿ ಅವರು ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು